ಕರ್ನಾಟಕ ಲಲಿತ­ಕಲಾ ಅಕಾಡೆಮಿಯ ಪ್ರಶಸ್ತಿಗಳು == 2013–14ನೇ ಸಾಲಿನ ಗೌರವ ಪ್ರಶಸ್ತಿ == ಪ್ರಶಸ್ತಿ ಪಡೆದವರು ಕಲಾವಿದ ಡಾ.ಬಿ.ಕೆ.ಎಸ್‌. ವರ್ಮ (ಬೆಂಗಳೂರು) , ಚಂದ್ರಕಾಂತ ಕುಸ­ನೂರ (ಬೆಳಗಾವಿ), ಲಕ್ಷ್ಮಿ ರಾಮಪ್ಪ (ಶಿವ­ಮೊಗ್ಗ) == 2014–15ನೇ ಸಾಲಿನ ಗೌರವ ಪ್ರಶಸ್ತಿ == ಪ್ರಶಸ್ತಿ ಪಡೆದವರು ಚಂದ್ರಶೇಖರ ಸೋಮಶೆಟ್ಟಿ (ಬೀದರ್‌), ಬಸವರಾಜ ಮುಳಸಾವಳಗಿ (ಮೈಸೂರು) ಮತ್ತು ಕೆ. ಗಂಗಾಧರ (ವಿಜಯಪುರ). == ಪ್ರಶಸ್ತಿ ಪ್ರದಾನ == ಈ ಪ್ರಶಸ್ತಿಯು ತಲಾ ₨ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ- 25-11-2014 ರಂದು ಪ್ರಶಸ್ತಿ ಪ್ರದಾನ. == ವಾರ್ಷಿಕ ಪ್ರಶಸ್ತಿ == 10 ಕಲಾವಿದರಿಗೆ ಅಕಾಡೆಮಿಯ ವಾರ್ಷಿಕ ಕಲಾ ಪ್ರಶಸ್ತಿ ಪ್ರಶಸ್ತಿ ಪಡೆದವರು ಎಸ್‌.ಎಚ್‌. ಮುಶಾಳ್ಕರ್, ಅಶೋಕ ಜಿ. ನೆಲ್ಲಗಿ ಮತ್ತು ಎಸ್‌.ಎಸ್‌. ಮರಗೋಳ (ಕಲಬುರ್ಗಿ), ಕೆ.ಎಸ್‌. ರಂಗನಾಥ್‌, ಜೆ. ದುಂಡರಾಜ ಮತ್ತು ಎನ್‌. ಕಾಂತರಾಜ್‌ (ಬೆಂಗಳೂರು), ಆನಂದ ಬೆದ್ರಾಳ (ದಕ್ಷಿಣ ಕನ್ನಡ), ದೇವೇಂದ್ರ ಹುಡಾ (ರಾಯಚೂರು), ಎನ್‌. ಪರಮೇಶ್ವರ (ಮೈಸೂರು) ಮತ್ತು ವಿಶ್ವೇಶ್ವರ ಪಟಗಾರ (ಉತ್ತರ ಕನ್ನಡ). ವಾರ್ಷಿಕ ಪ್ರಶಸ್ತಿಯು ₨ 5 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. == ನೋಡಿ == ಕರ್ನಾಟಕ ರಾಜ್ಯ ಪ್ರಶಸ್ತಿಗಳು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೃಪತುಂಗ ಸಾಹಿತ್ಯ ಪ್ರಶಸ್ತಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014 ಮಕ್ಕಳ ದಿನಾಚರಣೆ ಪ್ರಶಸ್ತಿ 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನ == ಆಧಾರ == ಸುದ್ದಿ ಮಾಧ್ಯಮ :ಪ್ರಜಾವಾಣಿ-22/11/2014 [೧]